¡Sorpréndeme!

ವಿಂಡ್​ ಟರ್ಬೈನ್​​ ಕೆಲಸ ನಿರ್ವಹಿಸುತ್ತಿದ್ದ ವೇಳೆ ಆಯತಪ್ಪಿ ಬಿದ್ದ ಸಿಬ್ಬಂದಿ: ಹೇಗಿತ್ತು ರಕ್ಷಣಾ ಕಾರ್ಯ? ವಿಡಿಯೋ

2025-04-19 28 Dailymotion

ಅನಂತಪುರ (ಆಂಧ್ರ ಪ್ರದೇಶ): ಅನಂತಪುರದಲ್ಲಿ ವಿಂಡ್​ ಟರ್ಬೈನ್​​ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕನೋರ್ವ ಆಯತಪ್ಪಿ ಬಿದ್ದು, ಪ್ರಾಣಾಪಾಯದಲ್ಲಿ ಸಿಲುಕಿಕೊಂಡಿದ್ದರು. ಆದ್ರೆ ಅದೃಷ್ಟವಶಾತ್​ ಸಹೋದ್ಯೋಗಿಗಳು ಮತ್ತು ಸ್ಥಳೀಯರ ಸಮಯಪ್ರಜ್ಞೆಯಿಂದ ಕಾರ್ಮಿಕನ ಜೀವ ಉಳಿದಿದೆ. 

ಅಪಾಯಕ್ಕೆ ಸಿಲುಕಿದ್ದ ಸಿಬ್ಬಂದಿ: ಸುಂದರೇಶ್ ವಿಂಡ್​ ಟರ್ಬೈನ್​ ಏರಿ ಅದರ ನಿರ್ವಹಣೆಯ ಕೆಲಸ ಮಾಡುತ್ತಿದ್ದಾಗ ಅಚಾನಕ್​ ಆಗಿ ಬೃಹತ್​ ಗಾತ್ರದ ಕಂಬದಿಂದ ಜಾರಿದ್ದಾರೆ. ಆಗ ಅವರಿಗೆ ಕಟ್ಟಿದ್ದ ರೋಪ್​ನಲ್ಲಿ ಗಾಳಿಯಲ್ಲಿ ತೇಲಾಡುತ್ತ ಅಪಾಯಕ್ಕೆ ಸಿಲುಕಿದ್ದರು. 

ತಕ್ಷಣಕ್ಕೆ ಅಗ್ನಿಶಾಮಕ ಸಿಬ್ಬಂದಿಗೆ ಕರೆ: ಈ ಕಾರ್ಮಿಕನೊಂದಿಗೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳು ಈ ದೃಶ್ಯವನ್ನು ಕಂಡು ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತಿಳಿದು ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಯು ಕಾರ್ಮಿಕನನ್ನು ಸುರಕ್ಷಿತವಾಗಿ ಕೆಳಕ್ಕೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಆತನನ್ನು ಕೂಡಲೇ ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ರವಾನಿಸಿದರು. ಕಾರ್ಮಿಕನ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. 

ಇದನ್ನೂ ಓದಿ:    ಹಾವು ಕಡಿತ ತಪ್ಪಿಸಲು ಸೇಫ್ಟಿ ಸ್ಟಿಕ್​ ಆವಿಷ್ಕರಿಸಿದ ಇಂಜಿನಿಯರಿಂಗ್​ ವಿದ್ಯಾರ್ಥಿಗಳು: ಇದರಿಂದ ಹೇಗೆ ರಕ್ಷಣೆ ಸಾಧ್ಯ?