ವಿಜಯನಗರ : ದನಗಳಿಗೆ ಹಾಕುವ ಹಿಂಡಿ ತುಂಬಿದ್ದ ಲಾರಿಗೆ ಬೆಂಕಿ ಹೊತ್ತಿಕೊಂಡು ಧಗ ಧಗನೆ ಹೊತ್ತಿ ಉರಿದಿರುವ ಘಟನೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಶಿವಪುರದಲ್ಲಿ ಜರುಗಿದೆ.
ಬಾಗಲಕೋಟೆಯಿಂದ ಬೆಂಗಳೂರು ಕಡೆಗೆ ಹೊರಟಿದ್ದ ಲಾರಿ ತಾಲೂಕಿನ ಶಿವಪುರ ಸಮೀಪದ ಹೈವೇ 50ರ ರಸ್ತೆಯಲ್ಲಿ ಏಕಾಏಕಿ ಪಲ್ಟಿಯಾಗಿದೆ. ಈ ವೇಳೆ ಡೀಸೆಲ್ ಟ್ಯಾಂಕ್ ಒಡೆದಿದ್ದು, ತಕ್ಷಣವೇ ಬೆಂಕಿ ಹತ್ತಿ ಲಾರಿ ಧಗಧಗನೇ ಹೊತ್ತಿ ಉರಿಯಲಾರಂಭಿಸಿದೆ. ಚಾಲಕ ತಕ್ಷಣವೇ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಲಾರಿಗೆ ಹೊತ್ತಿದ್ದ ಬೆಂಕಿಯನ್ನು ಆರಿಸಿದ ಅಗ್ನಿಶಾಮಕ ಸಿಬ್ಬಂದಿ : ವಿಷಯ ತಿಳಿದ ಕೂಡ್ಲಿಗಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಲಾರಿಗೆ ಹೊತ್ತಿದ್ದ ಬೆಂಕಿಯನ್ನು ಆರಿಸಿದ್ದಾರೆ. ಕೂಡ್ಲಿಗಿ ಪಿಎಸ್ಐ ಪ್ರಕಾಶ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಟ್ರಾಫಿಕ್ ಜಾಮ್ ಆಗದಂತೆ ಒನ್ ವೇ ಮೂಲಕ ವಾಹನ ಸಂಚಾರ ಸುಗಮಗೊಳಿಸಿದ್ದಾರೆ. ಘಟನೆ ಸಂಬಂಧ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಚಲಿಸುತ್ತಿದ್ದ ಲಾರಿಯಲ್ಲಿ ಹಠಾತ್ ಬೆಂಕಿ: ಪೀಣ್ಯ ಸಂಚಾರ ಬಂದ್ - LORRY CATCHES FIRE