¡Sorpréndeme!

ಮರಳು ಕಲೆಯ ಮೂಲಕ ಡೊನಾಲ್ಡ್ ಟ್ರಂಪ್​ಗೆ ಶುಭಾಶಯ ಕೋರಿದ ಸುದರ್ಶನ್ ಪಾಟ್ನಾಯಕ್ : ವಿಡಿಯೋ

2025-01-20 1 Dailymotion

ಒಡಿಶಾ : ಅಮೆರಿಕದ ನೂತನ ಅಧ್ಯಕ್ಷರಾಗಿ ಇಂದು ಪ್ರಮಾಣವಚನ ಸ್ವೀಕರಿಸಲಿರುವ ಡೊನಾಲ್ಡ್ ಟ್ರಂಪ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕಲಾವಿದ ಸುದರ್ಶನ್ ಪಾಟ್ನಾಯಕ್ ಅವರು ತಮ್ಮ ಕಲೆಯ ಮೂಲಕ ಶುಭ ಹಾರೈಸಿದ್ದಾರೆ.

ಸುಡಾನ್ ಪುರಿ ಬೀಚ್‌ನಲ್ಲಿ ಅಮೆರಿಕದ ನೂತನ ಅಧ್ಯಕ್ಷರ 47 ಅಡಿ ಉದ್ದದ ದೈತ್ಯ ಮರಳಿನ ಕಲಾಕೃತಿ ರಚಿಸಿದ್ದಾರೆ. ಇದರ ಮೇಲೆ ವೆಲ್​ಕಮ್​ ಟು ವೈಟ್​ ಹೌಸ್ ಎಂದು ಬರೆದಿದ್ದಾರೆ.

ಮರಳು ಕಲಾವಿದ ಸುದರ್ಶನ್ ಅವರು ತಮ್ಮ ಸ್ಯಾಂಡ್ ಆರ್ಟ್​ ಇನ್​ಸ್ಟಿಟ್ಯೂಟ್​ನ ವಿದ್ಯಾರ್ಥಿಗಳ ಜೊತೆಗೂಡಿ ಈ ಕಲಾಕೃತಿಯನ್ನ ರಚಿಸಿದ್ದಾರೆ. ಈ ಕಲಾಕೃತಿ ಟ್ರಂಪ್ ಪ್ರಮಾಣ ವಚನಕ್ಕೂ ಮುನ್ನ ಮಹತ್ವದ ಸಂದೇಶ ನೀಡುತ್ತದೆ.

ಕಲಾವಿದ ಸುದರ್ಶನ್ ಅವರು ಈ ಹಿಂದೆ ಹಲವು ಕಲಾಕೃತಿಗಳ ಮೂಲಕ ಸಾಮಾಜಿಕ ಹಾಗೂ ಪರಿಸರ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಿದ್ದಾರೆ. ಇವರು ಜಾಗತಿಕ ತಾಪಮಾನ, ಹೆಚ್​ಐವಿ, ಭಯೋತ್ಪಾದನೆಗಳ ಕುರಿತು ಸಂದೇಶಗಳನ್ನ ನೀಡಿದ್ದರು. ಇದೀಗ ಈ ಕಲಾಕೃತಿಯನ್ನ ನೋಡಲು ಪುರಿ ಬೀಚ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಇದನ್ನೂ ಓದಿ :