¡Sorpréndeme!

ರೈಲ್ವೆ ಬ್ಯಾರಿಕೇಡ್​ ಕಂಬಿಗಳ ನಡುವೆ ಸಿಲುಕಿ ಒದ್ದಾಡಿದ ಕಾಡಾನೆ; ಜೆಸಿಬಿ ಸಹಾಯದಿಂದ ರಕ್ಷಣೆ- ವಿಡಿಯೋ

2025-01-05 1 Dailymotion

ಮೈಸೂರು: ಆಹಾರ ಅರಸಿ ನಾಡಿಗೆ ಬಂದ ಕಾಡಾನೆಯೊಂದು ವಾಪಸ್​ ಕಾಡಿಗೆ ತೆರಳುತ್ತಿದ್ದಾಗ ರೈಲ್ವೆ ಬ್ಯಾರಿಕೇಡ್​ ಕಂಬಿಗಳ ನಡುವೆ ಸಿಲುಕಿ ಒದ್ದಾಡಿದ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ವೀರನ ಹೊಸಹಳ್ಳಿ ಅರಣ್ಯ ಪ್ರದೇಶದ ಹೊಸಕಟ್ಟೆ ಬಳಿ ಭಾನುವಾರ ಬೆಳಗ್ಗೆ ನಡೆಯಿತು. 

ಮದಗನೂರು ಸಮೀಪದ ಅರಸು ಹೊಸಕಟ್ಟೆ ಸಮೀಪ ರೈಲ್ವೆ ಕಂಬಿ ದಾಟುತ್ತಿದ್ದ ಆನೆ ಅದರ ಮಧ್ಯೆ ಸಿಲುಕಿಕೊಂಡಿದೆ. ಸುಮಾರು ಮೂರು ಗಂಟೆಗಳ ಕಾಲ ಹೊರಬರಲಾಗದೆ ಸಂಕಷ್ಟ ಅನುಭವಿಸಿದೆ. ಆನೆಯನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ, ಜೆಸಿಬಿ ಯಂತ್ರದ ಸಹಾಯದಿಂದ ಕಾಡಾನೆಯನ್ನು ರಕ್ಷಿಸಿದರು.

ಆನೆಯನ್ನು ಈ ಹಿಂದೊಮ್ಮೆ ಸೆರೆ ಹಿಡಿದಾಗ, ಚಲನವಲನ ತಿಳಿದುಕೊಳ್ಳಲು ಅದಕ್ಕೆ ಕಾಲರ್​ ಐಡಿ ಹಾಕಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿತ್ತು. ಆದರೆ ಬಳಿಕವೂ ಆಹಾರ ಅರಸಿಕೊಂಡು ಪದೇ ಪದೇ ಊರುಗಳತ್ತ ಇದೇ ಕಾಡಾನೆ ಬರುತ್ತಿತ್ತು. 

ಇದನ್ನೂ ಓದಿ: ಮೈಸೂರು : ಗೋಡೆಗೆ ತಲೆ ಸಿಲುಕಿಸಿಕೊಂಡು ಒದ್ದಾಡುತ್ತಿದ್ದ ಗೂಳಿಯ ರಕ್ಷಣೆ