ಯಾದಗಿರಿಯ ಬಸವಸಾಗರ ಜಲಾಶಯಕ್ಕೆ 1.75 ಲಕ್ಷ ಕ್ಯೂಸಕೆ ಒಳಹರಿವು ಇದ್ದು.. ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿಯಬಿಡಲಾಗ್ತಿದೆ. ಹೀಗಾಗಿ ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಹೀಗಾಗಿ ನದಿ ತೀರಕ್ಕೆ ಯಾರೂ ತೆರಳದಂತೆ ಎಸ್‍ಪಿ ಡಾ.ಸಿ.ಬಿ ವೇದಮೂರ್ತಿ ಎಚ್ಚರಿಕೆ ಕೊಟ್ಟಿದ್ದಾರೆ. ಜನರಲ್ಲದೇ ಜಾನುವಾರುಗಳನ್ನು ಸಹ ನದಿ ತೀರಕ್ಕೆ ಕಳಿಸಬೇಡಿ ಎಂದು ಸುರಪುರ, ಹುಣಸಗಿ, ಶಹಾಪುರ, ವಡಗೇರಾ ತಾಲೂಕಿನ 30 ಹಳ್ಳಿಯ ಜನರಿಗೆ ಮುನ್ನೆಚ್ಚರಿಕೆ ಕೊಡಲಾಗಿದೆ.
#publictv #rain #yadgiri