ಶಿಕಾರಿಪುರದ ರೈತಾಭಿಮಾನ ಕಾರ್ಯಕ್ರಮದಲ್ಲಿ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿದ್ದು, ರಾಜ್ಯದಲ್ಲಿ ಅನೇಕ ಹಿರಿಯ ರಾಜಕಾರಣಿಗಳನ್ನು ನೋಡಿದ್ದೇವೆ. ಆದರೆ ಜೀವನುದ್ದಕ್ಕೂ ಹೋರಾಟ ಮಾಡಿಕೊಂಡು ಬಂದವರು ಯಡಿಯೂರಪ್ಪ. ಹೋರಾಟದ ಬೆವರಿನಿಂದ ಮೇಲೆದ್ದು, ಸ್ವಂತ ಶಕ್ತಿಯಿಂದ ಬಂದವರು ಯಡಿಯೂರಪ್ಪ.
ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರೈತರಿಗೆ ಹಲವು ಯೋಜನೆಗಳನ್ನು ನೀಡಿದವರು ಬಿಎಸ್‌ವೈ. ರಾಜ್ಯದಲ್ಲಿ ಬೆಂಕಿಯಲ್ಲಿ ಅರಳಿದ ನಾಯಕ ಅಂದ್ರೆ ಅದು ಯಡಿಯೂರಪ್ಪ.
ಯಡಿಯೂರಪ್ಪ ಅವರನ್ನು ರಾಜ್ಯದಲ್ಲಿ ಅಷ್ಟೇ ಅಲ್ಲ, ದೇಶದ ಎಲ್ಲಿಯೇ ಹೋದರೂ ಗುರುತಿಸುತ್ತಾರೆ, ಇದಕ್ಕೆ ಶಿಕಾರಿಪುರ ಜನತೆ ನೀಡಿರುವ ಆಶೀರ್ವಾದವೇ ಕಾರಣ ಎಂದು ತಂದೆಯನ್ನು ಹೊಗಳಿದ್ದಾರೆ.
#PublicTV #BYVijayendra