ವರ್ಷ ಪೂರ್ಣ ಸುಭಾಷ್ ಚಂದ್ರ ಬೋಸ್ ಜಯಂತಿ: ಬೊಮ್ಮಾಯಿ
ಬೆಂಗಳೂರು: ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 125 ನೇ ಜನ್ಮದಿನದ ಅಂಗವಾಗಿ ಈ ವರ್ಷಪೂರ್ತಿ ಅವರ ಜಯಂತಿಯನ್ನು ಆಚರಿಸುತ್ತಿದ್ದೇವೆ. ಶಾಲಾ-ಕಾಲೇಜುಗಳಲ್ಲಿ ನೇತಾಜಿಯವರ ಬಗ್ಗೆ ಆಶುಭಾಷಣ, ಚರ್ಚಾಸ್ಪರ್ಧೆ, ಭಾಷಣಗಳು, ಏರ್ಪಡಿಸಿ, ನೇತಾಜಿಯವರ ಆದರ್ಶಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಅರ್ಥಪೂರ್ಣ ಆಚರಣೆಯನ್ನು ಹಮ್ಮಿಕೊಂಡಿದ್ದೇವೆ. ಅದಲ್ಲದೇ ನೇತಾಜಿಯವರ ಬಗ್ಗೆ ಪ್ರಕಟಿತವಾಗಿರುವ ಹಲವು ಲೇಖಕರ ಕೃತಿಗಳನ್ನು, ಕನ್ನಡಕ್ಕೆ ಭಾಷಾಂತರಿಸಿ, ನಾಡಿನ ಯುವಕರ ಮನೆ-ಮನಗಳಿಗೆ ತಲುಪಿಸುವ ಕೆಲಸ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
#ParakramDivas #BasavarajaBommayi