30-Feet Cutout Of Challenging Star Darshan Son Vineesh In Front Of Nartaki Theatre.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಟಿಸಿದ ಬಹುನಿರೀಕ್ಷಿತ ‘ಯಜಮಾನ’ ಚಿತ್ರ ಶುಕ್ರವಾರ ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಚಿತ್ರ ಬಿಡುಗಡೆ ಆಗುವ ದಿನ ಚಿತ್ರದ ನಟನ ಕಟೌಟ್ ಇರುವುದು ಸಾಮಾನ್ಯ. ಆದರೆ ಈ ಚಿತ್ರಕ್ಕೆ ದರ್ಶನ್ ಅವರ ಮಗ ವಿನೀಶ್‍ನ 30 ಅಡಿ ಕಟೌಟ್ ಹಾಕಲಾಗಿದೆ.
ಯಜಮಾನ ಚಿತ್ರ ವಿಶ್ವಾದ್ಯಂತ ಕನ್ನಡ ಭಾಷೆಯಲ್ಲೇ ಬಿಡುಗಡೆ ಆಗುತ್ತಿದೆ. ಈ ಚಿತ್ರ ಶುಕ್ರವಾರ ಬಿಡುಗಡೆ ಆಗಲಿದ್ದು, ಚಿತ್ರತಂಡ ಸಿದ್ಧತೆ ನಡೆಸಿಕೊಂಡಿದೆ. ಈ ಚಿತ್ರ ಬಿಡುಗಡೆ ಆಗುವ ಮುನ್ನವೇ ನರ್ತಕಿ ಚಿತ್ರಮಂದಿರದಲ್ಲಿ ವಿನೀಶ್‍ನ 30 ಅಡಿ ಕಟೌಟ್ ಹಾಕಲಾಗಿದೆ.
ದರ್ಶನ್ ಅವರ ಯಜಮಾನ ಚಿತ್ರದಲ್ಲಿ ಅವರ ಮಗ ವಿನೀಶ್ ಅವರು ಒಂದು ವಿಶೇಷ ಹಾಡಿನಲ್ಲಿ ನಟಿಸಿದ್ದಾರೆ. ಈ ಹಾಡಿನಲ್ಲಿ ಅಪ್ಪ ಮಗ ಒಟ್ಟಿಗೆ ಹೆಜ್ಜೆ ಹಾಕಿದ್ದಾರೆ. `ಐರಾವತ’ ಚಿತ್ರದ ನಂತರ ಯಜಮಾನ ಚಿತ್ರದಲ್ಲಿ ದರ್ಶನ್ ಹಾಗೂ ವಿನೀಶ್ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.
ಈ ಹಿಂದೆ ನಗರದ ಪ್ಯಾಲೇಸ್ ಗ್ರೌಂಡ್‍ನಲ್ಲಿ ಯಜಮಾನ ಚಿತ್ರದ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿದ್ದರು. ಆ ವೇಳೆ ಯಜಮಾನ ಚಿತ್ರದಲ್ಲಿ ಜೂನಿಯರ್ ದರ್ಶನ್, ವಿನೀಶ್ ಒಂದು ವಿಶೇಷ ಹಾಡಿನಲ್ಲಿ ನಟಿಸುತ್ತಿದ್ದಾರೆ ಎಂಬ ಸೀಕ್ರೆಟ್ ರಿವೀಲ್ ಆಗಿತ್ತು.
ಖ್ಯಾತ ನಿರ್ದೇಶಕ ಬಿ. ಸುರೇಶ್ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರುತ್ತಿದ್ದು, ದರ್ಶನ್ ಜೊತೆಯಾಗಿ ರಶ್ಮಿಕಾ ಮಂದಣ್ಣ ಹಾಗೂ ತಾನ್ಯ ಹೋಪ್ ಕಾಣಿಸಿಕೊಂಡಿದ್ದಾರೆ.
For latest updates on film news subscribe our channel.
Subscribe on YouTube: www.youtube.com/publicmusictv
Like us @ https://www.facebook.com/publicmusictv
Follow us @ https://twitter.com/publicmusictv