ಆಡಿ ಕಂಪನಿಯು ಭಾರತದಲ್ಲಿ ಇ-ಟ್ರಾನ್ ಎಸ್‌ಯುವಿ ಹಾಗೂ ಸ್ಪೋರ್ಟ್‌ಬ್ಯಾಕ್ ಮಾದರಿಗಳಿಗಾಗಿ ಬುಕ್ಕಿಂಗ್'ಗಳನ್ನು ಆರಂಭಿಸಿದೆ. ರೂ.5 ಲಕ್ಷ ಪಾವತಿಸಿ ಕಂಪನಿಯ ವೆಬ್‌ಸೈಟ್ ಅಥವಾ ದೇಶಾದ್ಯಂತವಿರುವ ಶೋರೂಂಗಳಲ್ಲಿ ಬುಕ್ಕಿಂಗ್ ಮಾಡಬಹುದು.
ಇ-ಟ್ರಾನ್ ಎಸ್‌ಯುವಿ ಭಾರತದಲ್ಲಿ ಜುಲೈ 22ರಂದು ಬಿಡುಗಡೆಯಾಗಲಿದೆ. ಆಡಿ ಇ-ಟ್ರಾನ್ ಎಸ್‌ಯುವಿಯ ಬೆಲೆ ಭಾರತದ ಎಕ್ಸ್‌ಶೋರೂಂ ದರದಂತೆ ರೂ.1 ಕೋಟಿಗಳಾಗುವ ನಿರೀಕ್ಷೆಗಳಿವೆ.
ಇ-ಟ್ರಾನ್ ಎಸ್‌ಯುವಿಯ ಮುಂಭಾಗದ ಆಕ್ಸಲ್'ನಲ್ಲಿ 125 ಕಿ.ವ್ಯಾ ಯುನಿಟ್ ಮೋಟರ್ ಹಾಗೂ ಹಿಂಭಾಗದ ಆಕ್ಸಲ್‌ನಲ್ಲಿ 140 ಕಿ.ವ್ಯಾ ಮೋಟರ್ ಅಳವಡಿಸಲಾಗಿದೆ. ಈ ಮೋಟರ್'ಗಳು ಜೊತೆಯಾಗಿ 408 ಬಿಹೆಚ್‌ಪಿ ಪವರ್ ಹಾಗೂ 664 ಎನ್‌ಎಂ ಟಾರ್ಕ್ ಉತ್ಪಾದಿಸುತ್ತವೆ.
ಆಡಿ ಇ-ಟ್ರಾನ್ ಎಸ್‌ಯುವಿ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.