¡Sorpréndeme!

ವಾರಂಟಿ ಹಾಗೂ ಫ್ರೀ ಸರ್ವೀಸ್ ಅವಧಿ ವಿಸ್ತರಿಸಿದ ಮಹೀಂದ್ರಾ ಅಂಡ್ ಮಹೀಂದ್ರಾ

2021-05-25 16,831 Dailymotion

ಕೋವಿಡ್ -19 ಎರಡನೇ ಅಲೆ ದೇಶಾದ್ಯಂತ ವೇಗವಾಗಿ ಹರಡುತ್ತಿದೆ. ಕರೋನಾ ವೈರಸ್ ಹರಡುವುದನ್ನು ತಡೆಯಲು ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಹಲವು ವಾಹನ ತಯಾರಕ ಕಂಪನಿಗಳು ಫ್ರೀ ಸರ್ವೀಸ್ ಹಾಗೂ ವಾರಂಟಿ ಅವಧಿಯನ್ನು ವಿಸ್ತರಿಸಿವೆ.

ಈಗ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ತನ್ನ ಎಲ್ಲಾ ವಾಹನಗಳ ವಾರಂಟಿ ಹಾಗೂ ಫ್ರೀ ಸರ್ವೀಸ್ ಅವಧಿಯನ್ನು ಜುಲೈ 31ರವರೆಗೆ ವಿಸ್ತರಿಸಿರುವುದಾಗಿ ತಿಳಿಸಿದೆ.

ಈ ವಿಸ್ತರಣೆಯು ಏಪ್ರಿಲ್ 1ರಿಂದ ಮೇ 31ರವರೆಗೆ ವಾರಂಟಿ ಅವಧಿ ಹೊಂದಿದ್ದ ಗ್ರಾಹಕರಿಗೆ ಅನ್ವಯಿಸಲಿದೆ.

ಮಹೀಂದ್ರಾ ಅಂಡ್ ಮಹೀಂದ್ರಾ ವಾರಂಟಿ ವಿಸ್ತರಣೆ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.