¡Sorpréndeme!

ಶೋರೂಂ ತೆರೆಯಲು ಭಾರತದ ಮೂರು ನಗರಗಳಲ್ಲಿ ಹುಡುಕಾಟ ಆರಂಭಿಸಿದ ಟೆಸ್ಲಾ

2021-04-09 3 Dailymotion

ಅಮೆರಿಕಾ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಟೆಸ್ಲಾ ಈ ವರ್ಷ ದೇಶಿಯ ಮಾರುಕಟ್ಟೆಗೆ ಕಾಲಿಡುವುದು ಖಚಿತವಾಗಿದೆ. ಭಾರತದಲ್ಲಿ ತನ್ನ ಮೊದಲ ಕಾರ್ ಅನ್ನು ಬಿಡುಗಡೆಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಕಂಪನಿಯು ಬೆಂಗಳೂರಿನಲ್ಲಿ ಆರ್ & ಡಿ ಕೇಂದ್ರವನ್ನು ಸ್ಥಾಪಿಸಲು ಮುಂದಾಗಿದೆ.

ಇತ್ತೀಚಿನ ವರದಿಗಳ ಪ್ರಕಾರ ಕಂಪನಿಯು ಬೆಂಗಳೂರು, ದೆಹಲಿ, ಮುಂಬೈ ನಗರಗಳಲ್ಲಿ ಶೋರೂಂಗಳನ್ನು ತೆರೆಯಲು ಜಾಗಗಳಿಗಾಗಿ ಹುಡುಕಾಟ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಟೆಸ್ಲಾ ಕಂಪನಿಯು 20,000-30,000 ಚದರ ಅಡಿಗಳಷ್ಟು ದೊಡ್ಡದಾದ ಶೋರೂಂಗಳಿಗಾಗಿ ಹುಡುಕಾಟ ನಡೆಸುತ್ತಿದೆ.

ಟೆಸ್ಲಾ ಕಂಪನಿಯ ಶೋರೂಂಗಳ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.