¡Sorpréndeme!

ವಿಟಾರಾ ಬ್ರೆಝಾದ 6 ಲಕ್ಷ ಯುನಿಟ್'ಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ

2021-03-05 43 Dailymotion

2016ರಲ್ಲಿ ಬಿಡುಗಡೆಯಾದಾಗಿನಿಂದ ಇದುವರೆಗೂ ವಿಟಾರಾ ಬ್ರೆಝಾದ 6 ಲಕ್ಷ ಯುನಿಟ್'ಗಳನ್ನು ಮಾರಾಟ ಮಾಡಿರುವುದಾಗಿ ಮಾರುತಿ ಸುಜುಕಿ ತಿಳಿಸಿದೆ. ಈ ಮೂಲಕ ಈ ಕಾಂಪ್ಯಾಕ್ಟ್-ಎಸ್‌ಯುವಿಯ ಮಾರಾಟದಲ್ಲಿ ಕಂಪನಿಯು ಹೊಸ ಮೈಲಿಗಲ್ಲು ಸಾಧಿಸಿದೆ.

ವಿಟಾರಾ ಬ್ರೆಝಾ 2017ರ ಫೆಬ್ರವರಿ ತಿಂಗಳಿನಲ್ಲಿ 1 ಲಕ್ಷ ಯುನಿಟ್ ಮಾರಾಟವನ್ನು ದಾಖಲಿಸಿದರೆ, 2017ರ ಅಕ್ಟೋಬರ್ ತಿಂಗಳಿನಲ್ಲಿ ಎರಡು ಲಕ್ಷ ಮಾರಾಟವನ್ನು ದಾಖಲಿಸಿತು. 2018ರ ಜುಲೈ ತಿಂಗಳಿನಲ್ಲಿ 3 ಲಕ್ಷ ಹಾಗೂ 2019ರ ಫೆಬ್ರವರಿ ತಿಂಗಳಿನಲ್ಲಿ 4 ಲಕ್ಷ ಯುನಿಟ್ ಮಾರಾಟವನ್ನು ದಾಖಲಿಸಿತು.

2019ರ ಡಿಸೆಂಬರ್ ತಿಂಗಳಿನಲ್ಲಿ 5 ಲಕ್ಷ ಮಾರಾಟದ ಮೈಲಿಗಲ್ಲನ್ನು ಸಾಧಿಸಿದ ಕಂಪನಿಯು ಈಗ 6 ಲಕ್ಷ ಯುನಿಟ್'ಗಳನ್ನು ಮಾರಾಟ ಮಾಡಿದೆ.

ಮಾರುತಿ ಸುಜುಕಿ ವಿಟಾರಾ ಬ್ರೆಝಾದ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.