¡Sorpréndeme!

ಟೊಯೊಟಾ ಅರ್ಬನ್ ಕ್ರೂಸರ್ ರಿವ್ಯೂ

2021-03-04 36,641 Dailymotion

ಉತ್ಪನ್ನಗಳನ್ನು ಹಂಚಿಕೊಳ್ಳುವ ಹಾಗೂ ದೇಶಿಯ ಮಾರುಕಟ್ಟೆಯಲ್ಲಿ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಟೊಯೊಟಾ ಹಾಗೂ ಸುಜುಕಿ ಕಂಪನಿಗಳು 2019ರ ಆಗಸ್ಟ್‌ ತಿಂಗಳಿನಲ್ಲಿ ಸಹಭಾಗಿತ್ವವನ್ನು ಮಾಡಿಕೊಂಡವು.

ಈ ಸಹಭಾಗಿತ್ವದಲ್ಲಿ ಮೊದಲ ಬಾರಿಗೆ ಟೊಯೊಟಾ ಗ್ಲಾಂಜಾ ಕಾರ್ ಅನ್ನು ಬಿಡುಗಡೆಗೊಳಿಸಲಾಯಿತು. ಗ್ಲಾಂಜಾ ಮಾರುತಿ ಸುಜುಕಿ ಕಂಪನಿಯ ಬಲೆನೋ ಕಾರಿನ ರಿ ಬ್ಯಾಡ್ಜ್ ಮಾಡಲಾದ ಆವೃತ್ತಿಯಾಗಿದೆ. ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಕಾರು ಜನಪ್ರಿಯತೆಯನ್ನು ಪಡೆದ ನಂತರ ಈಗ ಸುಜುಕಿ-ಟೊಯೊಟಾ ಸಹಭಾಗಿತ್ವದ ಎರಡನೇ ಕಾರ್ ಆದ ಅರ್ಬನ್ ಕ್ರೂಸರ್ ಅನ್ನು ಬಿಡುಗಡೆಗೊಳಿಸಲಾಗಿದೆ.

ಹೊಸ ಟೊಯೊಟಾ ಅರ್ಬನ್ ಕ್ರೂಸರ್ ಕಾರು ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾರ್ ಅನ್ನು ಆಧರಿಸಿದೆ. ಆದರೆ ಹೊಸ ಅರ್ಬನ್ ಕ್ರೂಸರ್ ಕಾರಿನ ಎಕ್ಸ್'ಟಿರಿಯರ್ ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, ವಿಟಾರಾ ಬ್ರೆಝಾ ಕಾರಿಗಿಂತ ವಿಭಿನ್ನವಾಗಿ ಕಾಣುತ್ತದೆ. ಈ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ನಾವು ಸಿಟಿಯೊಳಗೆ ಹಾಗೂ ಹೆದ್ದಾರಿಯಲ್ಲಿ ಚಾಲನೆ ಮಾಡಿದೆವು. ಈ ಎಸ್‌ಯುವಿಯ ರಿವ್ಯೂವನ್ನು ಈ ವೀಡಿಯೊದಲ್ಲಿ ನೋಡೋಣ.