¡Sorpréndeme!

ಐಎಕ್ಸ್ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಜಾಗತಿಕವಾಗಿ ಅನಾವರಣಗೊಳಿಸಿದ ಬಿಎಂಡಬ್ಲ್ಯು

2020-11-12 202 Dailymotion

ಬಿಎಂಡಬ್ಲ್ಯು ತನ್ನ ಮೊಟ್ಟಮೊದಲ ಎಲೆಕ್ಟ್ರಿಕ್ ಎಸ್‌ಯುವಿಯಾದ ಐಎಕ್ಸ್ ಅನ್ನು ಜಾಗತಿಕವಾಗಿ ಅನಾವರಣಗೊಳಿಸಿದೆ. ಹೊಸ ಐಎಕ್ಸ್ ಎಸ್‌ಯುವಿಯ ಉತ್ಪಾದನೆಯು ಮುಂದಿನ ವರ್ಷ ಆರಂಭವಾಗಲಿದೆ.

ಹೊಸ ಪ್ಲಾಟ್‌ಫಾರಂನಲ್ಲಿ ತಯಾರಾಗಲಿರುವ ಹೊಸ ಬಿಎಂಡಬ್ಲ್ಯು ಐಎಕ್ಸ್ ಎಸ್‌ಯುವಿಯು ಹೊಸ ಡಿಸೈನ್ ಲ್ಯಾಂಗ್ವೇಜ್, ಕನೆಕ್ಟೆಡ್ ಟೆಕ್ನಾಲಜಿ ಸೇರಿದಂತೆ ಹಲವು ಫೀಚರ್ ಗಳನ್ನು ಹೊಂದಿರಲಿದೆ.

ಬಿಎಂಡಬ್ಲ್ಯು ಕಂಪನಿಯು ಐಎಕ್ಸ್‌ ಎಸ್‌ಯುವಿಯಲ್ಲಿ ದೊಡ್ಡ ಕಿಡ್ನಿ ಶೇಪಿನ ಗ್ರಿಲ್ ರಾಡಾರ್ ಸಿಸ್ಟಂ, ಸೆನ್ಸಾರ್ ಹಾಗೂ ಕ್ಯಾಮೆರಾಗಳನ್ನು ನೀಡಿದೆ. ಹೊಸ ಐಎಕ್ಸ್ ಎಸ್‌ಯುವಿಯು ಭವಿಷ್ಯದ ಆಧಾರಿತ ಸ್ಟೈಲಿಂಗ್ ಅನ್ನು ಹೊಂದಿದೆ.

ಐಎಕ್ಸ್ ಎಲೆಕ್ಟ್ರಿಕ್ ಎಸ್‌ಯುವಿಯ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.