ಹ್ಯುಂಡೈ ಕಂಪನಿಯು ತನ್ನ ಎಂಟ್ರಿ ಲೆವೆಲ್ ಸ್ಯಾಂಟ್ರೊ ಹ್ಯಾಚ್‌ಬ್ಯಾಕ್ ಕಾರಿನ ಎರಡು ಹೊಸ ಸಿಎನ್‌ಜಿ ಮಾದರಿಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹ್ಯುಂಡೈ ಸ್ಯಾಂಟ್ರೊ ಮ್ಯಾಗ್ನಾ ಸಿಎನ್‌ಜಿ ಮಾದರಿಯ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.5.87 ಲಕ್ಷಗಳಾದರೆ, ಸ್ಪೋರ್ಟ್ಜ್ ಸಿಎನ್‌ಜಿ ಮಾದರಿಯ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.6 ಲಕ್ಷಗಳಾಗಿದೆ.
ಈ ಎರಡೂ ಹೊಸ ಮಾದರಿಗಳು ಪೆಟ್ರೋಲ್ ಎಂಜಿನ್ ಮಾದರಿಯಲ್ಲಿರುವಂತಹ ಫೀಚರ್ ಗಳನ್ನೇ ಹೊಂದಿವೆ. ಮ್ಯಾಗ್ನಾ ಸಿಎನ್‌ಜಿ ಮಾದರಿಯು 2-ಡಿಐಎನ್ ಆಡಿಯೊ ಸಿಸ್ಟಂ, ಸ್ಟೀಯರಿಂಗ್-ಮೌಂಟೆಡ್ ಕಂಟ್ರೋಲ್ಸ್, ಮ್ಯಾನುವಲ್ ಎಸಿ, ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಸ್ಮಾರ್ಟ್‌ಫೋನ್ ಸೇರಿದಂತೆ ಹಲವು ಫೀಚರ್ ಗಳನ್ನು ಹೊಂದಿದೆ.