ಬ್ರಿಟನ್ ಮೂಲದ ಐಷಾರಾಮಿ ವಾಹನ ತಯಾರಕ ಕಂಪನಿಯಾದ ಜಾಗ್ವಾರ್ ಲ್ಯಾಂಡ್ ರೋವರ್ ತನ್ನ ಡಿಫೆಂಡರ್ ಆಫ್-ರೋಡ್ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.
ಡಿಫೆಂಡರ್ ಎಸ್‌ಯುವಿಯನ್ನು ಇದೇ ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಇತ್ತೀಚಿಗೆ ನಾವು ಈ ಎಸ್‌ಯುವಿಯ ಫಸ್ಟ್ ಲುಕ್ ಅನ್ನು ವೀಕ್ಷಿಸಲಾಯಿತು. ಹೊಸ ಡಿಫೆಂಡರ್ ಎಸ್‌ಯುವಿಯು ಯಾವುದೇ ರಸ್ತೆಗಳಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಸ್‌ಯುವಿಯನ್ನು ಡಿಫೆಂಡರ್ 90 ಹಾಗೂ ಡಿಫೆಂಡರ್ 110 ಎಂಬ ಎರಡು ಮಾದರಿಗಳಲ್ಲಿ ಹಾಗೂ ತಲಾ ಐದು ಟ್ರಿಮ್‌ಗಳಲ್ಲಿ ಮಾರಾಟ ಮಾಡಲಾಗುವುದು.