ಆಡಿ ಕಂಪನಿಯು ತನ್ನ ಕ್ಯೂ 8 ಎಸ್‌ಯುವಿಯ ಸೆಲೆಬ್ರೇಷನ್ ಮಾದರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಆಡಿ ಕ್ಯೂ 8 ಸೆಲೆಬ್ರೇಷನ್ ಮಾದರಿಯ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.98.98 ಲಕ್ಷಗಲಾಗಿದೆ.
ಹೊಸ ಸೆಲೆಬ್ರೇಷನ್ ಮಾದರಿಯು ಕ್ಯೂ 8 'ಟೆಕ್ನಾಲಜಿ' ಮಾದರಿಗಿಂತ ರೂ.34.02 ಲಕ್ಷ ಕಡಿಮೆ ಬೆಲೆಯನ್ನು ಹೊಂದಿದೆ. ಈ ಹೊಸ ಎಸ್‌ಯುವಿಯನ್ನು ಕಂಪನಿಯ ಡೀಲರ್ ಗಳ ಬಳಿ ಅಥವಾ ಆನ್‌ಲೈನ್ ಚಿಲ್ಲರೆ ಮೂಲಕ ಖರೀದಿಸಬಹುದು.
ಈ ಎಸ್‌ಯುವಿಯಲ್ಲಿ 3.0-ಲೀಟರಿನ ಟಿಎಫ್‌ಎಸ್‌ಐ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 338 ಬಿಹೆಚ್‌ಪಿ ಪವರ್ ಹಾಗೂ 500 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನಲ್ಲಿ ಎಂಟು-ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಯೂನಿಟ್ ಜೋಡಿಸಲಾಗಿದೆ.