ಆಡಿ ಕಂಪನಿಯು ತನ್ನ ಹೊಸ ಕ್ಯೂ 2 ಎಸ್‌ಯುವಿಯನ್ನು ಅಕ್ಟೋಬರ್ 16ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದಾಗಿ ತಿಳಿಸಿದೆ. ಆಡಿ ಕ್ಯೂ 2 ಎಸ್‌ಯುವಿಯನ್ನು ಮೊದಲ ಬಾರಿಗೆ 2016 ರಲ್ಲಿ ಜಿನೀವಾ ಮೋಟಾರ್ ಶೋದಲ್ಲಿ ಪ್ರದರ್ಶಿಸಲಾಗಿತ್ತು.
ಕಂಪನಿಯು ಆಡಿ ಕ್ಯೂ 2 ಎಸ್‌ಯುವಿಗಾಗಿ ಬುಕಿಂಗ್ ಗಳನ್ನು ಆರಂಭಿಸಿದೆ. ಗ್ರಾಹಕರು ಆನ್ ಲೈನ್ ಮೂಲಕ ಅಥವಾ ಆಡಿ ಡೀಲರ್ ಗಳ ಬಳಿ ರೂ. 2 ಲಕ್ಷ ಪಾವತಿಸಿ ಈ ಎಸ್‌ಯುವಿಯನ್ನು ಬುಕ್ಕಿಂಗ್ ಮಾಡಬಹುದು.
ಈ ಹೊಸ ಎಸ್‌ಯುವಿಯು ಫೋಕ್ಸ್‌ವ್ಯಾಗನ್ ನ ಎಂಕ್ಯೂಬಿ ಪ್ಲಾಟ್‌ಫಾರಂನಲ್ಲಿ ತಯಾರಾಗಿದೆ. ಕ್ಯೂ 2 ಎಸ್‌ಯುವಿಯು 4,191 ಎಂಎಂ ಉದ್ದ, 1,794 ಎಂಎಂ ಅಗಲ, 1,508 ಎಂಎಂ ಎತ್ತರ ಹಾಗೂ 2,601 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ.
ಆಡಿ ಕ್ಯೂ 2 ಎಸ್‌ಯುವಿ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.