ಹೋಂಡಾ ಮೋಟಾರ್‌ಸೈಕಲ್ಸ್ ಅಂಡ್ ಸ್ಕೂಟರ್ಸ್ ಇಂಡಿಯಾ ಕಂಪನಿಯು ಇತ್ತೀಚೆಗೆ ತನ್ನ ಹೈನೆಸ್ ಸಿಬಿ 350 ಪ್ರೀಮಿಯಂ ಕ್ರೂಸರ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.
ಈ ಬೈಕಿನ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.1.90 ಲಕ್ಷಗಳಾಗಿದೆ. ಈ ಹೊಸ ಕ್ರೂಸರ್ ಬೈಕ್ ಅನ್ನು ಕಂಪನಿಯ ಬಿಗ್ ವಿಂಗ್ ಡೀಲರ್ ಗಳ ಮೂಲಕ ಪ್ರತ್ಯೇಕವಾಗಿ ಮಾರಾಟ ಮಾಡಲಾಗುವುದು.
ಇತ್ತೀಚಿಗೆ ಈ ಬೈಕ್ ಅನ್ನು ಬೆಂಗಳೂರಿನಲ್ಲಿರುವ ಕಂಪನಿಯ ಡೀಲರ್ ಗಳ ಬಳಿ ಪರೀಕ್ಷಿಸಲಾಯಿತು. ಹೊಸ ಹೈನೆಸ್ ಸಿಬಿ 350 ಬೈಕಿನ ಫಸ್ಟ್ ಲುಕ್ ಹಾಗೂ ವಾಕ್‌ರೌಂಡ್ ಅನ್ನು ಈ ವೀಡಿಯೊದಲ್ಲಿ ನೋಡೋಣ.