¡Sorpréndeme!

ಹೊಸ ಥಾರ್ ಎಸ್‌ಯುವಿ ಅನಾವರಣಗೊಳಿಸಿದ ಮಹೀಂದ್ರಾ

2020-08-17 80 Dailymotion

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ತನ್ನ 2020ರ ಹೊಸ ಥಾರ್ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಹೊಸ ಮಹೀಂದ್ರಾ ಥಾರ್ ಎಸ್‌ಯುವಿಯ ಎಕ್ಸ್ ಟಿರಿಯರ್, ಇಂಟಿರಿಯರ್, ಫೀಚರ್ ಹಾಗೂ ಎಕ್ವಿಪ್ ಮೆಂಟ್ ಗಳಲ್ಲಿ ಹಲವಾರು ಅಪ್ ಡೇಟ್ ಗಳನ್ನು ಮಾಡಲಾಗಿದೆ.

ಹೊಸ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಎಎಕ್ಸ್ ಹಾಗೂ ಎಲ್ಎಕ್ಸ್ ಸರಣಿ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಎಎಕ್ಸ್ ಮಾದರಿಯು ಅಡ್ವೆಂಚರ್ ಟೂರರ್ ಆಗಿದ್ದರೆ, ಎಲ್ಎಕ್ಸ್ ಮಾದರಿಯು ಟಾರ್ಮ್ಯಾಕ್ ಆಧಾರಿತವಾಗಿರಲಿದೆ. ಅಕ್ಟೋಬರ್ 2ರಂದು ಹೊಸ ಥಾರ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂಬುದನ್ನು ಖಚಿತಪಡಿಸಿರುವ ಮಹೀಂದ್ರಾ ಕಂಪನಿಯು ಅಧಿಕೃತ ಬುಕ್ಕಿಂಗ್ ಗಳನ್ನು ಸಹ ಅಂದೇ ಆರಂಭಿಸುವುದಾಗಿ ತಿಳಿಸಿದೆ.