¡Sorpréndeme!

ಎಕ್ಸ್‌ಟ್ರೀಮ್ 160 ಆರ್ ಬೈಕಿನ ಟೆಸ್ಟ್ ರೈಡ್‌ ಬುಕ್ಕಿಂಗ್‌ ಆರಂಭಿಸಿದ ಹೀರೋ ಮೊಟೊಕಾರ್ಪ್

2020-06-25 89 Dailymotion

ಹೀರೋ ಮೊಟೊಕಾರ್ಪ್ ಕಂಪನಿಯು ತನ್ನ ಎಕ್ಸ್‌ಟ್ರೀಮ್ 160 ಆರ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಮುನ್ನ ಟೆಸ್ಟ್ ರೈಡ್‌ಗಾಗಿ ಬುಕ್ಕಿಂಗ್‌ಗಳನ್ನು ಆರಂಭಿಸಿದೆ. ಟೆಸ್ಟ್ ರೈಡ್
ಬಯಸುವವರು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ರಿಜಿಸ್ಟರ್ ಮಾಡಬಹುದು.

ಎಕ್ಸ್‌ಟ್ರೀಮ್ 160 ಆರ್ ಬೈಕ್ ಅನ್ನು ದೇಶಾದ್ಯಂತ ಲಾಕ್‌ಡೌನ್ ಜಾರಿಯಾಗುವ ಮುನ್ನ ಕಂಪನಿಯ ಉತ್ಪಾದನಾ ಘಟಕದಲ್ಲಿ ಅನಾವರಣಗೊಳಿಸಲಾಗಿತ್ತು. ಈ ಬೈಕ್ ಬಹಳ ಹಿಂದೆಯೇ ಬಿಡುಗಡೆಯಾಗ
ಬೇಕಾಗಿತ್ತಾದರೂ ಕರೋನಾ ವೈರಸ್ ಕಾರಣದಿಂದಾಗಿ ಈ ಬೈಕಿನ ಬಿಡುಗಡೆಯನ್ನು ಮುಂದೂಡಲಾಗಿದೆ.

ಕಂಪನಿಯು ಟೆಸ್ಟ್ ರೈಡ್‌ಗಾಗಿ ಬುಕ್ಕಿಂಗ್‌ಗಳನ್ನು ಆರಂಭಿಸಿರುವುದನ್ನು ಗಮನಿಸಿದರೆ, ಈ 160 ಸಿಸಿಯ ಈ ನೇಕೆಡ್ ಸ್ಟ್ರೀಟ್-ಫೈಟರ್ ಬೈಕ್ ಸದ್ಯದಲ್ಲೇ ಬಿಡುಗಡೆಯಾಗುವ ಸಾಧ್ಯತೆಗಳಿವೆ.