¡Sorpréndeme!

ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ರಿವ್ಯೂ

2019-12-24 1 Dailymotion

MG ZS EV review in Kannada: ಜೆಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿ ಆವೃತ್ತಿಯು ಹೆಕ್ಟರ್ ಎಸ್‌ಯುವಿ ನಂತರ ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಎಂಜಿ ಮೋಟಾರ್ ಸಂಸ್ಥೆಯ ಎರಡನೇ ಕಾರು ಆವೃತ್ತಿಯಾಗಿದೆ. 44.5kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಹೊಂದಿರುವ ಜೆಡ್ಎಸ್ ಎಲೆಕ್ಟ್ರಿಕ್ ಕಾರು 141-ಬಿಎಚ್‌ಪಿ ಪರ್ಫಾಮೆನ್ಸ್ ಉತ್ಪಾದನೆ ಜೊತೆಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 340 ಕಿ.ಮಿ ಮೈಲೇಜ್ ಹಿಂದಿರುಗಿಸುತ್ತದೆ. 2020ರ ಜನವರಿ ಮಧ್ಯಂತರದಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರು ಹಲವಾರು ವಿಶೇಷತೆಗಳೊಂದಿಗೆ ರಸ್ತೆಗಿಳಿಯುತ್ತಿದ್ದು, ಬಿಡುಗಡೆಗೂ ಮುನ್ನ ಜೆಡ್ಎಸ್ ಇವಿ ಕಾರಿನ ಚಾಲನೆಗಾಗಿ ಡ್ರೈವ್‌ಸ್ಪಾರ್ಕ್ ತಂಡಕ್ಕೆ ಎಂಜಿ ಸಂಸ್ಥೆಯು ಆಹ್ವಾನ ನೀಡಿತ್ತು.

ಹಾಗಾದ್ರೆ ಹೊಸ ಜೆಡ್ಎಸ್ ಎಲೆಕ್ಟ್ರಿಕ್ ಕಾರಿನಲ್ಲಿ ಏನೆಲ್ಲಾ ವಿಶೇಷತೆಗಳಿವೆ? ಕಾರಿನ ಡಿಸೈನ್, ಒಳಾಂಗಣ ವಿನ್ಯಾಸ, ಪರ್ಫಾಮೆನ್ಸ್ ಮತ್ತು ಹ್ಯಾಂಡ್‌ಲಿಂಗ್ ಸೇರಿದಂತೆ ಇತರೆ ಮಾಹಿತಿಗಳನ್ನು ಈ ವಿಡಿಯೋ ನೀವು ನೋಡಬಹುದಾಗಿದೆ.