ಆಫ್-ರೋಡ್ ಪ್ರಿಯರಿಗೆ ಮಾಹಿತಿ ಜೊತೆಗೆ ಕಾರ್ಯಗಾರ ನಡೆಸುತ್ತಿರುವ ಮಹೀಂದ್ರಾ ಅಡ್ವೆಂಚರ್ ವಿಭಾಗವು ದೇಶದ ಎರಡನೇ ಆಫ್-ರೋಡ್ ಟ್ರೈನಿಂಗ್ ಅಕಾಡೆಮಿಗೆ ಚಾಲನೆ ನೀಡಿದೆ. ಹೊಸ ಆಫ್-ರೋಡ್ ಟ್ರೈನಿಂಗ್ ಅಕಾಡೆಮಿಯನ್ನು ಈ ಬಾರಿ ಮಂಗಳೂರಿನಲ್ಲಿ ತೆರೆಯಲಾಗಿದ್ದು, ಈ ಭಾಗದಲ್ಲಿರುವ ಆಫ್-ರೋಡ್ ಪ್ರಿಯರಿಗೆ ವೈಜ್ಞಾನಿಕವಾಗಿ ಕಾರ್ಯಗಾರ ನಡೆಸುವುದೇ ಈ ಅಕಾಡೆಮಿಯ ಉದ್ದೇಶವಾಗಿದೆ. ಆಫ್-ರೋಡ್ ತರಬೇತಿ ನೀಡಲು ಬರೋಬ್ಬರಿ 150 ಎಕರೆ ವಿಸ್ತಿರ್ಣದಲ್ಲಿ ಹೊಸ ಟ್ರೈನಿಂಗ್ ಕ್ಯಾಂಪಸ್ ತೆರೆಯಲಾಗಿದ್ದು, 5.5 ಕಿ.ಮಿ ಉದ್ದದ ಆಫ್-ರೋಡ್ ಮಾರ್ಗವಿರುವ ಈ ಕ್ಯಾಂಪಸ್‌ನಲ್ಲಿ ನುರಿತ ತಂತ್ರಜ್ಞರಿಂದ ಕಾರ್ಯಗಾರ ನಡೆಸಲಾಗುತ್ತೆ.
#Mahindra #MahindraAdventure #Off-road #Scorpio #MahindraSUV