¡Sorpréndeme!

ಶಿರಾಡಿ ಘಾಟ್ ಬಗ್ಗೆ ಪುತ್ತೂರು ತಜ್ಞ ಇಂಜಿನಿಯರ್ಸ್ ತಂಡ ಸಿಎಂಗೆ ಕೊಟ್ಟ ವರದಿಯಲ್ಲೇನಿದೆ? | Oneindia Kannada

2018-09-03 495 Dailymotion

Shiradi Ghat, Putturu Engineers (in Dakshina Kannada district) submitted detailed report to CM of Karnataka HD Kumaraswamy. Twelve members of team personally visited the ghat and given detailed report in that, what should be done, what precautionary we need to take points also mentioned.


ಭಾರೀ ಮಳೆ ಮತ್ತು ಭೂಕುಸಿತದಿಂದ ಬಂದ್ ಆಗಿರುವ ಶಿರಾಡಿ ಘಾಟ್ ಮತ್ತೆ ಸಂಚಾರಕ್ಕೆ ಮುಕ್ತವಾಗುವುದು ಯಾವಾಗ ಎನ್ನುವ ಗೊಂದಲಕ್ಕೆ ಶನಿವಾರ (ಸೆ 1) ರಾಜ್ಯ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ತೆರೆಯೆಳೆದಿದ್ದರು. ಮುಂದಿನ ಹತ್ತು ದಿನದೊಳಗೆ ಸ್ಥಳೀಯ ತಜ್ಞರ ವರದಿಯನ್ನು ಆಧರಿಸಿ ಭಾರೀ ವಾಹನಗಳನ್ನು ಹೊರತು ಪಡಿಸಿ ಇತರ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದಿದ್ದರು. ಆದರೆ, ದಕ್ಷಿಣಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸೆಪ್ಟಂಬರ್ ಮೂರರಿಂದಲೇ ಸಂಚಾರಕ್ಕೆ ಶಿರಾಡಿ ಮುಕ್ತಗೊಳಿಸಬಹುದು ಎಂದು ಹೆದ್ದಾರಿ ಕಾರ್ಯಪಾಲಕ ಇಂಜಿನಿಯರ್, ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.