ಎಲ್ಲರಿಗೂ ಗೊತ್ತಿರುವ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಟಾಕಿಂಗ್ ಸ್ಟಾರ್ ಸೃಜನ್ ಪ್ರಾಣಿ ಪ್ರಿಯರು... ಪರಿಸರ ಪ್ರೇಮಿಗಳು... ಹಾಗೇ, ಇವರಿಬ್ಬರಿಗೂ ದೇವರ ಮೇಲೆ ಅಪಾರ ನಂಬಿಕೆ ಇದೆ. ಆಸ್ತಿಕರಾಗಿರುವ 'ಗಜ' ಮತ್ತು 'ಸೃಜ' ಒಟ್ಟಿಗೆ ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಿರುವ ಉದಾಹರಣೆ ಇದೆ. ವಿಶೇಷವಾಗಿ ಬೆಂಗಳೂರಿನ ಶ್ರೀನಗರದಲ್ಲಿರುವ ಬಂಡೆ ಮಹಾಕಾಳಮ್ಮನ ಮೇಲೆ ದರ್ಶನ್ ಮತ್ತು ಸೃಜನ್ ಗೆ ಬೆಟ್ಟದಷ್ಟು ಭಕ್ತಿಯಿದೆ.