ಆಧಾರ್ ಕಾರ್ಡ್ ಇಂದು ದೇಶದಲ್ಲಿ ಬಹು ಚರ್ಚಿತ ವಿಷಯವಾಗಿದ್ದು, ಭಾರತ ಸರಕಾರವು ದೇಶದ ಎಲ್ಲಾ ನಾಗರೀಕರು ಆಧಾರ್ ಕಾರ್ಡ್ ಹೊಂದುವುದನ್ನು ಕಡ್ಡಾಯ ಮಾಡಿರುವುದಲ್ಲದೇ ಸರಕಾರಿ ಸೇವೆ ಸೌಲಭ್ಯಗಳನ್ನು ಪಡೆದುಕೊಳ್ಳಲು ಆಧಾರ್ ಕಡ್ಡಾಯ ಮಾಡಿದೆ. ಇಲ್ಲದೇ ಪ್ಯಾನ್ ಕಾರ್ಡ್ ಮತ್ತು ಬ್ಯಾಂಕ್ ಆಕೌಂಟ್ ನೊಂದಿಗೆ ಆಧಾರ್ ಲಿಂಕ್ ಮಾಡಲೇ ಬೇಕಾಗಿದೆ. ಅಲ್ಲದೇ ಶೀಘ್ರವೇ ಡ್ರೈವಿಂಗ್ ಲೈಸೆನ್ಸ್ ನೊಂದಿಗೂ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಲಿದೆ. ಈ ರೀತಿಯಲ್ಲಿ ಎಲ್ಲಾ ಕಡೆಗಳಲ್ಲೂ ಆಧಾರ್ ಬಳಕೆ ಮಾಡಿಕೊಳ್ಳುತ್ತಿರುವದರಿಂದ ಆಧಾರ್ ಸುರಕ್ಷತೆಯ ಬಗ್ಗೆಯೂ ಪ್ರಶ್ನೆಗಳು ಎದ್ದಿದ್ದು, ಅನೇಕ ಕಡೆಗಳಲ್ಲಿ ಆಧಾರ್ ಮಾಹಿತಿ ಸೋರಿಕೆಯಾಗಿರುವ ಪ್ರಕರಣಗಳು ವರದಿಯಾಗಿದೆ. ಈ ಹಿನ್ನಲೆಯಲ್ಲಿ ಆಧಾರ್ ಕಾರ್ಡ್ ಬಳಕೆದಾರರಿಗೆ ಕೇಂದ್ರ ಸರಕಾರವೂ ಹೊಸದೊಂದು ಆಯ್ಕೆಯನ್ನು ನೀಡಿದ್ದು, ಕಳೆದ ಆರು ತಿಂಗಳಿನಲ್ಲಿ ತಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ ಎಂಬುದನ್ನು ಚೆಕ್ ಮಾಡುವ ಅವಕಾಶ ಮಾಡಿಕೊಟ್ಟಿದೆ. ಇದರಲ್ಲಿ ಯಾವುದಾರು ಕಾರಣದಿಂದ ಆಧಾರ್ ಮಾಹಿತಿ ಮಿಸ್ ಯೂಸ್ ಆಗಿದ್ದರೆ ಆ ಕುರಿತು ದೂರು ಸಹ ದಾಖಲಿಸಬಹುದಾಗಿದೆ.