ಕಳೆದ ಅಂದರೆ 2013ರ ಅಸೆಂಬ್ಲಿ ಚುನಾವಣೆಯಲ್ಲಿ ಕೆಜೆಪಿ, ಬಿಜೆಪಿಯ ಮತವಿಭಜನೆಯ ಭರಪೂರ ಲಾಭ ಪಡೆದುಕೊಂಡ ಪ್ರಿಯಾಂಕ್ ಖರ್ಗೆ, ಭರ್ಜರಿ ಮೂವತ್ತು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯ ವಿರುದ್ದ ಜಯಗಳಿಸಿದ್ದರು. ತಮ್ಮ ಮೊದಲ ಪ್ರಯತ್ನದಲ್ಲಿ (2008ರ ಚುನಾವಣೆ) ಸೋತಿದ್ದ ಪ್ರಿಯಾಂಕ್ ಖರ್ಗೆ, ಎರಡನೇ ಪ್ರಯತ್ನದಲ್ಲಿ ಯಶಸ್ಸನ್ನು ಪಡೆದುಕೊಂಡರು. ನಂತರ ಜೂನ್ 2016ರಲ್ಲಿ ಸಿದ್ದರಾಮಯ್ಯನವರ ಸರಕಾರದಲ್ಲಿ ಕ್ಯಾಬಿನೆಟ್ ರ‍್ಯಾಂಕಿಂಗ್ ಪಡೆದುಕೊಂಡ ಪ್ರಿಯಾಂಕ್, ಸದ್ಯ ಮೂರ್ಮೂರು ಖಾತೆಯನ್ನು ನಿಭಾಯಿಸುತ್ತಿದ್ದಾರೆ.