¡Sorpréndeme!

ರಜಿನಿಕಾಂತ್ ಅನಕ್ಷರಸ್ಥ, ರಾಜಕೀಯಕ್ಕೆ ಬರೋದು ಗಿಮಿಕ್ ಅಂದ್ರು ಸುಬ್ರಮಣಿಯನ್ ಸ್ವಾಮಿ

2017-12-31 879 Dailymotion

Soon after superstar Rajinikanth announced his decision to enter politics and form his own party, BJP leader Subramanian Swamy said the actor is unfit for politics."He only announced he is entering politics, had no details or documents, he is illiterate. Its only media hype, people of Tamil Nadu are intelligent," ANI quoted Subramanian Swamy.

ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ರಾಜಕೀಯ ಪ್ರವೇಶವನ್ನು ಖಚಿತಪಡಿಸಿದ್ದಾರೆ.ಕಳೆದ ಮೇ ತಿಂಗಳಿನಲ್ಲಿ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದ ರಜನಿಕಾಂತ್ ಅವರು ನಂತರ ಈ ಬಗ್ಗೆ ಮೌನ ವಹಿಸಿದ್ದರು.ಹುಟ್ಟುಹಬ್ಬದ ದಿನದಂದು ಏನಾದರೂ ಶುಭ ಸುದ್ದಿ ಘೋಷಿಸುವರೇ ಎಂದು ಅಭಿಮಾನಿಗಳು ಎಂದಿನಂತೆ ಕಾದಿದ್ದರು. ಆದರೆ, ಹುಟ್ಟುಹಬ್ಬ ಆಚರಣೆ ಹಾಗೂ ರಜನಿ ದೂರ ಉಳಿದಿದ್ದರು.ಆದರೆ, ಚೆನ್ನೈನ ರಾಘವೇಂದ್ರ ಹಾಲ್ ನಲ್ಲಿ ಅಭಿಮಾನಿಗಳ ಜತೆಗಿನ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾನುವಾರ(ಡಿಸೆಂಬರ್ 31)ದಂದು ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಘೋಷಣೆ ಮಾಡಿದ್ದಾರೆ.ಇದೀಗ ರಜಿನಿ ರಾಜಕೀಯ ಪ್ರವೇಶದ ಬಗ್ಗೆ ಹಲವು ಬಿಜೆಪಿ ನಾಯಕರು ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸುತ್ತಿದ್ದಾರೆ. ಇದರಲ್ಲಿ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಕೂಡ ಒಬ್ಬರು. ರಜಿನಿ ರಾಜಕೀಯ ಪ್ರವೇಶ ಒಂದು ಗಿಮಿಕ್, ಕೇವಲ ಮಾಧ್ಯಮ ಪ್ರಚಾರವಷ್ಟೇ ಎಂದಿದ್ದಾರೆ. ರಜಿನಿಕಾಂತ್ ಅನಕ್ಷರಸ್ಥ ಎಂದು ಕೂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ