¡Sorpréndeme!

ರಮ್ಯಾ ಸುದೀಪ್ ರನ್ನ ಭೇಟಿಯಾಗಿದ್ಯಾಕೆ? | Filmibeat Kannada

2017-12-28 3,666 Dailymotion

According to the source actress and Congress social media team head Ramya met Kannada actor Kiccha Sudeep. And Sudeep got invitation to join Congress party.

'ನಟ ಸುದೀಪ್ ರಾಜಕೀಯಕ್ಕೆ ಬರುತ್ತಾರಾ..?' ಈ ರೀತಿಯ ಪ್ರಶ್ನೆ ಅನೇಕ ಬಾರಿ ಬಂದಿದೆ. ಸುದೀಪ್ ಕೂಡ ಈ ಹಿಂದೆಯೇ ''ನನಗೆ ಮತ್ತು ರಾಜಕೀಯಕ್ಕೆ ಆಗಿ ಬರಲ್ಲ.''' ಅಂತ ಹೇಳಿದ್ದಾರೆ. ಆದರು ಪದೇ ಪದೇ ಸುದೀಪ್ ರಾಜಕೀಯ ಎಂಟ್ರಿ ಸುದ್ದಿ ಕೇಳಿಬರುತ್ತಿದೆ. ಸದ್ಯ ಮತ್ತೆ ಸುದೀಪ್ ರಾಜಕೀಯ ವಿಷಯ ಸುದ್ದಿ ಮಾಡಿದೆ. ಈಗಾಗಲೇ ಸುದೀಪ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ವಿಷ್ಣು ಸ್ಮಾರಕದ ವಿಚಾರವಾಗಿ ಬೇಟಿ ಮಾಡಿದ್ದರು. ಆ ನಂತರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸುದೀಪ್ ಮನೆಗೆ ಹೋಗಿ ಬಂದಿದ್ದರು. ಇವುಗಳ ನಂತರ ನಟಿ ಹಾಗೂ ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾದ ಮುಖ್ಯಸ್ಥೆ ರಮ್ಯಾ ನಟ ಸುದೀಪ್ ಅವರನ್ನು ಭೇಟಿ ಮಾಡಿ ರಾಜಕೀಯದ ಬಗ್ಗೆ ಮಾತುಕತೆ ನಡೆಸಿದ್ದಾರಂತೆ. ಅದ್ದರಿಂದ ನಟ ಸುದೀಪ್ ಕಾಂಗ್ರೆಸ್ ಕೈ ಹಿಡಿಯುತ್ತಾರಾ ಎನ್ನುವ ಕುತೂಹಲ ಹುಟ್ಟಿದೆ.