¡Sorpréndeme!

ಟೈಟಲ್ : ಭಾರತ ಮತ್ತು ಶ್ರೀಲಂಕ 2 ನೇ ಟೆಸ್ಟ್ ಸಾರಾಂಶ

2017-11-28 32 Dailymotion

India annihilates Srilanka in 2nd Test match equalling its biggest victory of innings & 239 runs.


ಡಿಸ್ಕ್ರಿಪ್ಷನ್ : ಮೊದಲ ಟೆಸ್ಟ್ ರೋಚಕ ಡ್ರಾ ದಲ್ಲಿ ಮುಗಿದ ನಂತರ ಎರಡನೇ ಟೆಸ್ಟ್ ನಲ್ಲಿ ಗೆದ್ದೇ ಗೆಲ್ಲಬೇಕೆಂದು ಭಾರತ ಪಣ ತೊಟ್ಟಿತ್ತು.ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕ ರನ್ ಗಳಿಸುವುದಕ್ಕಿಂತ ಡಿಫೆನ್ಸಿನ್ ಆಟಕ್ಕೆ ಹೆಚ್ಚು ಒತ್ತು ಕೊಟ್ಟಿತ್ತು.ಮೊದಲ ದಿನದ ಆಟ ಮುಗಿದಾಗ 205 ರನ್ ಗಳಿಸಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತ್ತು ಶ್ರೀಲಂಕ.ಭಾರತ 1 ವಿಕೆಟ್ ನಷ್ಟಕ್ಕೆ 11 ರನ್ ಗಳಿಸಿತ್ತು. 2ನೇ ದಿನ ಭರ್ಜರಿ ಶತಕ ಗಳಿಸಿದ ಮುರಳಿ ವಿಜಯ್ ಮತ್ತು ಪೂಜಾರ ಭಾರತವನ್ನು 312 ರನ್ ಗಳ ಸುಸ್ಥಿರ ಹಂತಕ್ಕೆ ತಲುಪಿಸಿದರು.ದಿನದ ಆಟ ಮುಗಿದಾಗ ವಿರಾಟ್ ಕೊಹ್ಲಿ ಮತ್ತು ಪೂಜಾರ ಔಟಾಗದೇ ಉಳಿದಿದ್ದರು. 3ನೇ ದಿನದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ದ್ವಿಶತಕ ಮತ್ತು ರೋಹಿತ್ ಶರ್ಮ ಸೆಂಚುರಿ ಭಾರತವನ್ನು 610 ರನ್ ಗಳ ಭಾರಿ ಮೊತ್ತಕ್ಕೆ ತಲುಪಿಸಿತ್ತು.ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ಭಾರತ 406 ರನ್ ಗಳ ಲೀಡ್ ಸಾಧಿಸಿತ್ತು.ಎರಡನೇ ಇನ್ನಿಂಗ್ಸ್ ಶುರು ಮಾಡಿದ ಶ್ರೀಲಂಕ ದಿನದ ಅಂತ್ಯದ ವೇಳೆಗೆ 1 ವಿಕೆಟ್ ನಷ್ಟಕ್ಕೆ 21 ರನ್ ಗಳಿಸಿ ಸೋಲಿನತ್ತ ಮುಖ ಮಾಡಿತ್ತು. 4ನೇ ದಿನದ ಆಟ ಶುರು ಮಾಡಿದ ಶ್ರೀಲಂಕ ಕೇವಲ 1 ಘಂಟೆ ಮಾತ್ರ ಭಾರತದ ಬೌಲಿಂಗ್ ಗೆ ಪ್ರತಿರೋಧ ಒಡ್ಡುವಲ್ಲಿ ಯಶಸ್ವಿಯಾಯಿತು.ಅಶ್ವಿನ್, ಉಮೇಶ್, ಜಡೇಜ ಬೌಲಿಂಗ್ ಗೆ ತತ್ತರಿಸಿದ ಶ್ರೀಲಂಕ ದಾಂಡಿಗರು ಒಬ್ಬರಾದ ಮೇಲೊಬ್ಬರು ಪೆವಿಲಿಯನ್ ಗೆ ಮರಳುತ್ತ ಆಲ್ ಔಟ್ ಆದರು.ಭಾರತ ಟೆಸ್ಟ ಕ್ರಿಕೆಟ್ ಹಿಂದೆ ಸಾಧಿಸಿದ್ದ ಇನ್ನಿಂಗ್ಸ್ ಮತ್ತು 239 ರನ್ ಗಳ ಅತಿ ದೊಡ್ಡ ಗೆಲುವನ್ನು ಮತ್ತೊಮ್ಮೆ ಸರಿಗಟ್ಟಿತ್ತು.ಅಶ್ವಿನ್ 300 ವಿಕೆಟ್ ಗಳಿಸಿದ ಸಾಧನೆ ಮೆರೆದರೆ ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.