¡Sorpréndeme!

Bigg Boss Kannada Season 5 : ತಮಗೆ ಆದ ಅವಮಾನದ ಬಗ್ಗೆ ಚಂದನ್ ಶೆಟ್ಟಿಗೆ ಹೇಳಿಕೊಂಡಿದ್ದು ಹೀಗೆ

2017-11-16 1,349 Dailymotion

ತಮಗಾದ ಅವಮಾನವನ್ನ 'ಬಿಗ್ ಬಾಸ್' ಮುಂದೆ ಹೇಳಿಕೊಂಡ ಚಂದನ್ ಶೆಟ್ಟಿ. ಅಡುಗೆ ಮನೆಯ ಡಿಪಾರ್ಟ್ಮೆಂಟ್ ನಲ್ಲಿ ಚಂದನ್ ಶೆಟ್ಟಿ ಇದ್ದಾಗ, ''ರಾತ್ರಿ ಮಲಗುವ ಮುನ್ನ ಪಾತ್ರೆಗಳನ್ನ ತೊಳೆದು ಇಡಲ್ಲ. ಅಡುಗೆ ಮನೆಯನ್ನ ಗಲೀಜಾಗಿ ಮೇನ್ಟೇನ್ ಮಾಡಿದ್ದಾರೆ'' ಅಂತೆಲ್ಲ ಸೆಲೆಬ್ರಿಟಿ ಸ್ಪರ್ಧಿಗಳು ದೂರಿದ್ದರು. ಇದೀಗ ಈ ವಾರ ಚಂದನ್ ಶೆಟ್ಟಿ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಅಡುಗೆ ಮನೆಯನ್ನ ಸಿಹಿ ಕಹಿ ಚಂದ್ರು, ಅನುಪಮಾ ಗೌಡ, ಆಶಿತಾ ಸೇರಿದಂತೆ ಒಟ್ಟು ಆರು ಮಂದಿಗೆ ವಹಿಸಿದ್ದಾರೆ. ಅಡುಗೆ ಮನೆ ಡಿಪಾರ್ಟ್ಮೆಂಟ್ ನಲ್ಲಿ ಆರು ಮಂದಿ ಇದ್ದರೂ, ಮಲಗುವ ಮುನ್ನ ಪಾತ್ರೆಗಳನ್ನು ತೊಳಿದಿಟ್ಟಿಲ್ಲ. ಅಡುಗೆ ಮನೆಯನ್ನ ಕ್ಲೀನ್ ಮಾಡಿಲ್ಲ. ಇದನ್ನೆಲ್ಲ ಗಮನಿಸಿದ ಚಂದನ್ ಶೆಟ್ಟಿ, ತಮ್ಮ ಅಳಲನ್ನು 'ಬಿಗ್ ಬಾಸ್' ಮುಂದೆ ತೋಡಿಕೊಂಡಿದ್ದಾರೆ.''ಕಳೆದ ವಾರ, ತೊಳೆಯಲು ಎರಡು ಪ್ಲೇಟ್, ಒಂದು ಬೌಲ್ ಬಾಕಿ ಇತ್ತು ಅಷ್ಟೇ. ಅಷ್ಟಕ್ಕೆ, ಇದೇ ವಿಷಯಕ್ಕೆ ದೊಡ್ಡ ರಾದ್ಧಾಂತ ಮಾಡಿದ್ದರು. ಈಗ ಇಷ್ಟೆಲ್ಲ ಪಾತ್ರೆಗಳನ್ನು ಬಿಟ್ಟಿದ್ದಾರೆ'' ಎಂದು ಕ್ಯಾಮರಾ ಮುಂದೆ ಚಂದನ್ ಶೆಟ್ಟಿ ಹೇಳುತ್ತಿದ್ದರು.