¡Sorpréndeme!

Suresh Prabhu Plans Delhi To Chennai in 6 Hrs By Bullet Train

2014-11-15 9 Dailymotion

TV9 News: Suresh Prabhu Plans Delhi To Chennai in 6 Hrs By Bullet Train...,
ದೆಹಲಿಯಿಂದ ಚೆನ್ನೈಗೆ ರೈಲಿನಲ್ಲಿ ಸಂಚರಿಸೋಕೆ ಈಗ 28 ಗಂಟೆ ಕಾಲಾವಕಾಶ ಬೇಕು. ಆದರೇ, ಎಲ್ಲವೂ ಅಂದುಕೊಂಡಂತೆ ನಡೆದರೇ, ಮುಂದಿನ ವರ್ಷಗಳಲ್ಲಿ ಕೇವಲ ಆರು ಗಂಟೆಯಲ್ಲಿ ದೆಹಲಿಯಿಂದ ಚೆನ್ನೈ ತಲುಪಬಹುದು. ದೆಹಲಿ ಮತ್ತು ಚೆನ್ನೈ ನಡುವೆ ಹೈಸ್ಪೀಡ್ ರೈಲು ಕಾರಿಡಾರ್ ನಿರ್ಮಿಸಲು ಕೇಂದ್ರ ರೈಲ್ವೇ ಇಲಾಖೆ ಉದ್ದೇಶಿಸಿದೆ. ಯೋಜನೆ ಜಾರಿಯ ಸಾಧ್ಯ ಅಸಾಧ್ಯತೆ ಬಗ್ಗೆ ಮಾತುಕತೆ ನಡೆಸಲು ಭಾರತೀಯ ರೈಲ್ವೇ ಇಲಾಖೆಯ ಅಧಿಕಾರಿಗಳ ಉನ್ನತ ತಂಡವು ಈ ತಿಂಗಳಾಂತ್ಯದಲ್ಲಿ ಚೀನಾ ಪ್ರವಾಸ ಕೈಗೊಳ್ಳುತ್ತಿದೆ. ವಿಶ್ವದ ಎರಡನೇ ಅತಿ ದೊಡ್ಡ ಹೈ ಸ್ಪೀಡ್ ಟ್ರೇನ್ ಕಾರಿಡಾರ್ ಅನ್ನು ದೆಹಲಿ ಮತ್ತು ಚೆನ್ನೈ ನಗರಗಳ ನಡುವೆ ನಿರ್ಮಿಸಲು ಕೇಂದ್ರ ಸರ್ಕಾರದ ಪ್ಲಾನ್ . ಗಂಟೆಗೆ ಮುನ್ನೂರು ಕಿಲೋಮೀಟರ್ ವೇಗದಲ್ಲಿ ಸಂಚರಿಸುವ ಹೈ ಸ್ಪೀಡ್ ಟ್ರೇನ್ ಯೋಜನೆ ಜಾರಿಗೊಳಿಸಲು ಕೇಂದ್ರದ ನೂತನ ರೈಲ್ವೇ ಸಚಿವ ಸುರೇಶ್ ಪ್ರಭು ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಈ ಹೈ ಸ್ಪೀಡ್ ಟ್ರೇನ್ ಕಾರಿಡಾರ್ ನಿರ್ಮಾಣಕ್ಕೆ ಎರಡು ಲಕ್ಷ ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಮುಂದಿನ ವರ್ಷದ ಮೊದಲಾರ್ಧದಲ್ಲಿ ಯೋಜನೆ ಆರಂಭವಾಗೋ ನಿರೀಕ್ಷೆ ಇದೆ.